ಸಾಯಿ ಬಾಬಾ ತಮ್ಮ ಅನುಯಾಯಿಗಳಿಗಾಗಿ ಕೇವಲ 11 ಬೋಧನೆಗಳ ಸೂತ್ರವನ್ನು ನೀಡಿದರು , ಅವೆಂದರೆ : |
|
ಶಿರಡಿಯ ಮಣ್ಣಿನ ಮೇಲೆ ಯಾರೇ ಕಾಲಿರಿಸಿದರೂ , ಅವರ ದುಃಖಗಳು ಕೊನೆಗೊಳ್ಳುತ್ತವೆ . |
|
ದುಃಖಿತರು ಮತ್ತು ಸಂಕಷ್ಟಗಳಲ್ಲಿ ಸಿಲುಕಿದವರು ನನ್ನ ಸಮಾಧಿಯ ಮೆಟ್ಟಿಲುಗಳನ್ನು ಏರುತ್ತಿದ್ದಂತೆಯೇ , ತಮ್ಮೆಲ್ಲಾ ಬವಣೆಗಳನ್ನು ನೀಗಿಸಿಕೊಂಡು ಹೆಚ್ಚಿನ ಆನಂದ ಮತ್ತು ಸಂತೋಷವನ್ನು ಪಡೆಯುತ್ತಾರೆ . |
|
ಈ ಪಾರ್ಥಿವ ಶರೀರವನ್ನು ತ್ಯಜಿಸಿದ ನಂತರವೂ ನನ್ನ ಇರುವಿಕೆ ಇನ್ನೂ ಹೆಚ್ಚು ಶಕ್ತಿ ಮತ್ತು ಉತ್ಸಾಹದಿಂದ ಮುಂದುವರೆಯುತ್ತದೆ . |
|
ನನ್ನ ಸಮಾಧಿಯು ನನ್ನ ಭಕ್ತರ ಭಾವನೆಗಳಿಗೆ ಪ್ರತಿಸ್ಪಂದಿಸುತ್ತದೆ ಅವರಿಗೆ ಆಶೀರ್ವಾದ ನೀಡುತ್ತದೆ . |
|
ಸಮಾಧಿಯಿಂದಲೂ ನಾನು ಸಕ್ರಿಯ ಹಾಗೂ ಕೃಪಾಪೂರ್ಣನಾಗಿರುತ್ತೇನೆ . |
|
ನನ್ನ ಪಾರ್ಥಿವ ಶರೀರದ ಉಳಿಕೆಗಳು ಸಮಾಧಿಯಿಂದಲೇ ಮಾತನಾಡುತ್ತವೆ . |
|
ಎಲ್ಲರಿಗೂ ಸಹಾಯಹಸ್ತ ನೀಡಲು ಮತ್ತು ನನ್ನೆಡೆ ಬರುವವರಿಗೆ , ಶರಣಾಗತರಾದವರಿಗೆ ಮತ್ತು ನನ್ನನ್ನೇ ಆಶ್ರಯಿಸಿದವರಿಗೆ ಮಾರ್ಗದರ್ಶನ ಮಾಡಲೋಸುಗ ನಾನು ಎಂದೆಂದೂ ಇರುತ್ತೇನೆ . |
|
ನೀವು ನನ್ನನ್ನು ನೋಡಿದರೆ , ನಾನು ನಿಮ್ಮನ್ನು ನೋಡುತ್ತೇನೆ . |
|
ನೀವು ನಿಮ್ಮೆಲ್ಲಾ ಭಾರಗಳನ್ನೂ ನನಗೆ ವಹಿಸಿಕೊಟ್ಟರೆ , ಖಂಡಿತ ನಾನು ಅವೆಲ್ಲವನ್ನೂ ತೆಗೆದುಕೊಳ್ಳುತ್ತೇನೆ . |
|
ನೀವು ನನ್ನ ಸಲಹೆ ಹಾಗೂ ಸಹಾಯಕ್ಕಾಗಿ ಮೊರೆಬಂದರೆ , ಅದು ನಿಮಗೆ ಕೂಡಲೇ ದೊರೆಯುತ್ತದೆ . |
|
ನನ್ನ ಭಕ್ತರ ಮನೆಯಲ್ಲಿ ಯಾವುದಕ್ಕೂ ಕೊರತೆ ಇರದು . |